ADS

Ads-1

Actor Darshan : cauvery fighters turned against actor darshan demand an immediate apology

Actor Darshan: cauvery fighters turned against actor darshan demand an immediate apology  - ಕರ್ನಾಟಕದಲ್ಲಿ ಜನಪ್ರಿಯ ನಟರಲ್ಲಿ ಒಬ್ಬರಾದ ದರ್ಶನ್ ವಿರುದ್ಧ ಮತ್ತೊಂದು ಕೂಗು ಕೇಳಿ ಬಂದಿದೆ. ಕಾವೇರಿ ವಿಚಾರವಾಗಿ ನಟ ದರ್ಶನ್ ರವರು ಬೇಜವಾಬ್ದಾರಿತನದ ಮಾತುಗಳನ್ನು ಆಡಿದ್ದಾರೆ ಎಂದು ಕರ್ನಾಟಕದ ಕಾವೇರಿ ಹೋರಾಟಗಾರರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅಷ್ಟಕ್ಕೂ ಕಾವೇರಿ ವಿಚಾರದಲ್ಲಿ ನಟ ದರ್ಶನ್ ಅವರು ಹೇಳಿರುವ ಹೇಳಿಕೆಯಾದರೂ ಏನು ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

Actor Darshan : cauvery fighters turned against actor darshan demand an immediate apology


ನಟ ದರ್ಶನ್ ರವರು ಕಾವೇರಿ ಗಲಾಟೆ ರಂಗಾಗುವ ಸಮಯದಲ್ಲಿ ಹೇಳಿಕೆಯೊಂದನ್ನು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾತನಾಡಿದ್ದಾರೆ. ನಟ ದರ್ಶನವರು ಹೇಳಿಕೆಯನ್ನು ನೀಡಿದ ಮೂಲಕ ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ನಟ ದರ್ಶನ್ ರವರು ಕಾವೇರಿ ಹೋರಾಟಗಾರರ ಬಗ್ಗೆ ಮಾತನಾಡುವಾಗ ನೀವು ತಮಿಳು ಸಿನಿಮಾಗಳನ್ನ ನೋಡಿ ಅವರಿಗೆ ಕೋಟಿ ಕೋಟಿ ಹಣ ಕೊಟ್ಟಿದ್ದೀರಿ, ಈಗ ಮಾತ್ರ ಕಾವೇರಿ ಹೋರಾಟ ವಿಚಾರ ವಿಷಯ ಬಂದಾಗ ಕಿಚ್ಚ ಸುದೀಪ್, ನಟ ಯಶ್ ಹಾಗೂ ನಾನು ಮಾತ್ರ ಕಾಣೋದಾ ಎಂದು ಕಾವೇರಿ ಹೋರಾಟಗಾರರನ್ನು ನಟ ದರ್ಶನವರು ಪ್ರಶ್ನಿಸುತ್ತಾರೆ. ಈ ಮಾತುಗಳಿಂದ ಕಾವೇರಿ ಪರ ಹೋರಾಟಗಾರರು ನಟ ದರ್ಶನ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.



ನಟ ದರ್ಶನ್ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

ಕಾವೇರಿ ವಿಚಾರವಾಗಿ ನಟ ದರ್ಶನ್ ಅವರು ತಮ್ಮ ಬೇಜವಾಬ್ದಾರಿತನದ ಮಾತುಗಳನ್ನು ಮಾತನಾಡಿದರೆ ಮೂಲಕ ಕಾವೇರಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿಯಲ್ಲಿ ಹೋರಾಟಗಾರರು ನಟ ದರ್ಶನ್ ವಿರುದ್ಧ ಘೋಷಣೆಯನ್ನು ಹೋಗಿ ದರ್ಶನ್ ರವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕರ್ನಾಟಕದ ನಟರ ವಿರುದ್ಧ ಕಾವೇರಿ ಹೋರಾಟಗಾರರ ಕಿಡಿ
ಕರ್ನಾಟಕದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದರು ಕಾವೇರಿ ಹೋರಾಟಗಾರರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಹಲವಾರು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದರು ಕರ್ನಾಟಕದ ಯಾವುದೇ ನಟರು ಸಹ ಹೋರಾಟಕ್ಕೆ ತಮ್ಮ ಬೆಂಬಲವನ್ನ ನೀಡಿಲ್ಲ ಎಂದು ಕಾವೇರಿ ಹೋರಾಟಗಾರರು ಕನ್ನಡ ನಟ ವಿರುದ್ಧ ಕಿಡಿಯನ್ನು ಕಾರಿದ್ದರು. ಬಳಿಕ ಈ ಒಂದು ಹೇಳಿಕೆಯನ್ನು ಗಮನಿಸಿದ ನಟರು ಹೋರಾಟಕ್ಕೆ ಹಲವಾರು ಮೂಲಕ ತಮ್ಮ ಬೆಂಬಲವನ್ನ ನೀಡಿದ್ದರು ಆದರೆ ನಟ ದರ್ಶನ್ ಅವರು ಭಾಷಣ ಮಾಡುವಾಗ ಹಾಡಿದ ಮಾತುಗಳು ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಬಹುದು.


ಕಾವೇರಿ ಹೋರಾಟಗಾರರ ರೈತರಿಗೆ ಕ್ಷಮೆ ಕೇಳಿ

ಕಾವೇರಿ ಹೋರಾಟಗಾರರು ನಾವು ಸತತವಾಗಿ ಒಂದು ತಿಂಗಳಿಂದ ಹೋರಾಟವನ್ನು ನಡೆಸುತ್ತಿದ್ದೇವೆ. ನಮ್ಮ ಈ ಹೋರಾಟಕ್ಕೆ ನಟ ದರ್ಶನ್ ರವರು ಬಂದರೆ ಒಂದು ಆನೆ ಬಲ ಬಂದಂತೆ ಆಗುತ್ತದೆ ಎಂದು ತಿಳಿದು ನಿಮ್ಮನ್ನು ಹೋರಾಟಕ್ಕೆ ಆಹ್ವಾನಿಸಿದ್ದೆವು. ನೀವು ಕಾವೇರಿಕೊಳ್ಳದ ಜಿಲ್ಲೆಯವರಾಗಿದ್ದುಕೊಂಡು ಕಾವೇರಿ ಹೋರಾಟಗಾರರ ಬಗ್ಗೆ ತೀಕ್ಷ್ಣವಾಗಿ ಮಾತನಾಡುವುದು ಸರಿಯೇ ? ಕರ್ನಾಟಕದ ಪ್ರಸಿದ್ಧ ನಟನಾಗಿ ಒಂದು ಜವಾಬ್ದಾರಿತ ಸ್ಥಾನದಲ್ಲಿ ಇದ್ದು ಈ ಹೋರಾಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಆದರೆ ಈ ರೀತಿ ಮಾತುಗಳು ನಿಮಗೆ ಶೋಬೆ ನೀಡುವುದಿಲ್ಲ. ನಟ ದರ್ಶನ್ ರವರು ರೈತರಿಗೆ ಕ್ಷಮೆ ಯಾಚಿಸಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಅಷ್ಟಕ್ಕೂ ನಟ ದರ್ಶನ್ ಹೇಳಿದ್ದಾದರೂ ಏನು?

ನಟ ದರ್ಶನರವರು ಮೊದಲು ಕಾಂಟ್ರೋಲ್ಸಿ ಬಗ್ಗೆ ಮಾತನಾಡೋಣ ಚಿನ್ನ ಎಂದು ತಮ್ಮ ಮಾತುಗಳನ್ನು ಆರಂಭಿಸಿದರು. ಕನ್ನಡ ಸಿನಿಮಾದ ಕಲಾವಿದರು ಬಗ್ಗೆ ನೀವು ಹಲವಾರು ರೀತಿಯ ಆರೋಪಗಳನ್ನ ಮಾಡುತ್ತೀರಿ. ನೀವು ಅದಕ್ಕೆ ಬರಲಿಲ್ಲ ಇದಕ್ಕೆ ಬರ್ಲಿಲ್ಲ ಅಂತ ಕೇಳುತ್ತಾರಲ್ಲ. ಇತ್ತೀಚಿಗೆ ಕರ್ನಾಟಕದಲ್ಲಿ ಒಂದು ತಮಿಳು ಸಿನಿಮಾ ಬಿಡುಗಡೆ ಆಯಿತು. ಅದನ್ನು ಒಬ್ಬರು ಬರೋಬ್ಬರಿ 6 ಕೋಟಿ ಖರೀದಿಸಿ ಕರ್ನಾಟಕದಲ್ಲಿ ಬರೋಬ್ಬರಿ 36 ಕೋಟಿ ಲಾಭ ಪಡೆದರು. ಆ ತಮಿಳು ಸಿನಿಮಾವನ್ನು ನೋಡಿದವರು ಬೇರೆ ಯಾರು ಅಲ್ಲ ನಮ್ಮ ಕರ್ನಾಟಕದವರೇ ಎಂದು ಹೇಳಿದರು. ಕರ್ನಾಟಕದಲ್ಲಿ ಬೇರೆ ರಾಜ್ಯದಿಂದ ಬಿಡುಗಡೆಯಾದ ಸಿನಿಮಾಗಳಿಗೆ ನೂರಾರು ಕೋಟಿ ಕೊಡುತ್ತೀರಿ ಯಾಕೆ ನೀವು ಕನ್ನಡ ಸಿನಿಮಾ ಗೆ ಕೊಡೋದಿಲ್ಲ ಸ್ವಾಮಿ ಎಂದು ನಟ ದರ್ಶನದವರು ಪ್ರಶ್ನೆ ಮಾಡಿದ್ದಾರೆ. ನೀವು ತಮಿಳು ನಟರ ಬಾಯಿ ಬಂದ್ ಮಾಡಲಿಲ್ಲ ಯಾಕೆ?

ಕನ್ನಡ ಸಿನಿಮಾ ನೋಡಿದರೆ ಕನ್ನಡದ ಕಲಾವಿದರು ಬರುತ್ತಾರೆ
ನೀವುಗಳು ಕರ್ನಾಟಕದಲ್ಲಿ ಕನ್ನಡ ಸಿನಿಮಾಗೆ ಪ್ರೋತ್ಸಾಹ ಕೊಟ್ಟರೆ ಕನ್ನಡದ ಕಲಾವಿದರು ಬರುತ್ತಾರೆ ಸ್ವಾಮಿ, ಯಾವುದು ಒಂದು ತಮಿಳು ಸಿನಿಮಾಗೆ ಪ್ರೋತ್ಸಾಹ ಕೊಟ್ರೆ ಹೇಗೆ? ತಮಿಳುನಾಡಿನ ನಟರು ಸಹ ದೊಡ್ಡ ಕಲಾವಿದರೇ, ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಆದರೆ ಆ ಸಿನಿಮಾಗಳನ್ನು ನೋಡಿದ್ದು ಯಾರು? ನಮ್ಮ ಕರ್ನಾಟಕದವರು ನಮ್ಮ ಕನ್ನಡದವರು ತಾನೆ, ಕರ್ನಾಟಕದಿಂದ ಸುಮಾರು 36 ಕೋಟಿ ತಮಿಳುನಾಡಿಗೆ ಹೋಗಿದೆ ಈಗ ಅವರ ಬಾಯಿ ಬಂದ್ ಆಗಿಲ್ಲ. ಆದರೆ ಅಷ್ಟೊಂದು ಲಾಭ ಮಾಡಿದವರು ಅಂತ ನಟರ ವಿರುದ್ಧ ಮಾಡಿಲ್ಲ ಎಂದು ದರ್ಶನ್ ಚಳಿ ಬಿಡಿಸಿದ್ದಾರೆ.

ಕೇವಲ ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ಕಾಣುವುದು?

ತಮಿಳುನಾಡಿನ ನಟರಿಗೆ ಅವರ ಸಿನಿಮಾಕ್ಕೆ ಅಷ್ಟೊಂದು ಲಾಭ ಮಾಡಿದ ನಮ್ಮ ಕರ್ನಾಟಕದವರು ಅವರಿಗೆ ಒಂದು ಟ್ಯೂಟ್ ಸಹ ಮಾಡಲಿಲ್ಲ ಅವರ ಬಾಯಿ ಬಂದ್ ಮಾಡಿಲ್ಲ ಕೇವಲ ನಟ ದರ್ಶನ್ ಶಿವಣ್ಣ ಹಾಗೂ ಸುದೀಪ್ ಮತ್ತು ಯಶ್ ಮಾತ್ರಾನೇ ನಿಮಗೆ ಕಾಣುವುದು ಯಾಕೆ ನಿಮಗೆ ಅವರಾರು ಕಾಣಿಸುವುದಿಲ್ಲ ಎಂದು ನಟ ದರ್ಶನ್ ತಮಿಳು ಸಿನಿಮಾ ಹಾಗೂ ನಟ ಕಲಾವಿದರ ಬಗ್ಗೆ ಮಾತನಾಡಿದ್ದಾರೆ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.

ನಟ ದರ್ಶನ್ ರವರು ಹೇಳಿರುವ ಈ ಈ ಮಾತುಗಳು ಸರಿಯೇ ತಪ್ಪು ಎಂಬುದನ್ನು ನೀವು ನಮಗೆ ಕಮೆಂಟ್ ಮೂಲಕ ತಿಳಿಸಬೇಕು. ನಟ ದರ್ಶನ್ ರವರು ಏನೇ ಮಾತನಾಡಿದರು ಅವರ ಮಾತಿಗೆ ಒಂದು ಅರ್ಥವಿರುತ್ತದೆ. ಕರ್ನಾಟಕದವರಾಗಿ ಕನ್ನಡ ಸಿನಿಮಾವನ್ನು ನೋಡುವುದು ಬಿಟ್ಟು ಬೇರೆ ರಾಜ್ಯದ ಸಿನಿಮಾಗಳನ್ನ ನೋಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ ಹೇಳಿ ಈ ಮಾಹಿತಿಯನ್ನು ಆದಷ್ಟು ಬೇಗ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಮತ್ತೊಂದು ಮಾಹಿತಿಯೊಂದಿಗೆ ನಿಮ್ಮನ್ನು ನಾವು ತಲುಪುತ್ತೇವೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.