ADS

Ads-1

Swahalambi Sarathi Yojana Karnataka 2023: ವಾಹನ ಸಬ್ಸಿಡಿ ಯೋಜನೆ ಕರ್ನಾಟಕ 2023

 ನಮಸ್ಕಾರ ಗೆಳೆಯರೇ, ಇವತ್ತಿನ ಮಾಹಿತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆ ಮೂಲಕ ಪ್ರತಿಯೊಬ್ಬರೂ ಸಹ 3 ಲಕ್ಷ ರೂಪಾಯಿ ಸಬ್ಸಿಡಿಯನ್ನು ಪಡೆಯಬಹುದು. ಸಬ್ಸಿಡಿ ಪಡಿಯಲು ಬೇಕಾಗುವ ಅರ್ಹತೆ ಹಾಗೂ ಯಾವ ಯಾವ ದಾಖಲಾತಿಗಳನ್ನು ಅರ್ಜಿ ಸಲ್ಲಿಕೆಗೆ ನೀಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯೋಣ. ಸರ್ಕಾರವು ಬಿಡುಗಡೆಗೊಳಿಸುವ ಪ್ರತಿಯೊಂದು ಸೌಲತ್ತುಗಳನ್ನು ಕರ್ನಾಟಕದ ಪ್ರತಿಯೊಬ್ಬ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರತಿಯೊಬ್ಬ ಜನರು ಸಹ ಬಳಸಿಕೊಳ್ಳಬೇಕು.

Swahalambi Sarathi Yojana Karnataka 2023


ಸ್ವಾವಲಂಬಿ ಸಾರಥಿ ಯೋಜನೆ 2023:

ಈ ಮಾಹಿತಿಯನ್ನು ಓದುತ್ತಿರುವವರು ವಾಹನ ಚಾಲಕರಾಗಿದ್ದರೆ ಅಥವಾ ನಿಮ್ಮದೇ ಆದ ಸ್ವಂತ ವಾಹನ ಖರೀದಿಸಲು ಇಚ್ಛೆ ಪಡುತ್ತಿದ್ದರೆ ಹಾಗಾದರೆ ಈ ಮಾಹಿತಿ ನಿಮಗಾಗಿ. ಕರ್ನಾಟಕ ರಾಜ್ಯ ಸರ್ಕಾರವು ವಾಹನ ಸಬ್ಸಿಡಿ ಯೋಜನೆ ಮೂಲಕ ಸ್ವಂತ ವ್ಯಾಪಾರ ಶುರು ಮಾಡಲು ಸುಮಾರು 3 lakh ರೂಪಾಯಿ ಸಬ್ಸಿಡಿ ನೀಡುತ್ತಿದೆ. ನಾವು ನೀಡುವ ಈ ಮಾಹಿತಿಯನ್ನ ಪೂರ್ಣವಾಗಿ ಓದಿ ಮತ್ತು ಈ ಯೋಜನೆಯ ಸೌಲಭ್ಯವನ್ನು ಪಡೆಯಿರಿ.

ನಮ್ಮ ಕರ್ನಾಟಕದಲ್ಲಿ ಪ್ರಸ್ತುತ ಹಲವಾರು ನಿರುದ್ಯೋಗಿ ಯುವಕ ಯುವತಿಯನ್ನು ನೋಡುತ್ತೇವೆ ಅವರಿಗೆ ಓದಿದ ವಿದ್ಯಾರ್ಹತೆ ಅನುಗುಣವಾಗಿ ಕೆಲಸ ಸಿಗುವುದಿಲ್ಲ. ಇದರಿಂದ ನಾವು ಮನೆಯಲ್ಲಿ ಪದವಿ ಪಡೆದರು ಸಹ ಯಾವುದೇ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗಿದೆ. ಇಂತಹ ನಿರುದ್ಯೋಗವನ್ನು ತೊಡೆದು ಹಾಕಲು ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತ ಇರುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಕೇವಲ ಕೆಲವೇ ಜನರು ಮಾತ್ರ. ಜನ ಸರ್ಕಾರವು ಬಿಡುಗಡೆ ಮಾಡುವ ಉಪಯುಕ್ತ ಯೋಜನೆಯಲ್ಲಿ ಈ ಸ್ವಾವಲಂಬಿ ಸಾರಥಿ ಯೋಜನೆ ಒಂದಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಸಹ ರೂಪಾಯಿ ಮೂರು ಲಕ್ಷ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಲಾಭವನ್ನು ಪಡೆಯಲು ಆಸಕ್ತರು ಇಲಾಖೆಯ ಅಧಿಕೃತ ವಿಳಾಸದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ಅರ್ಹತೆ ಹಾಗೂ ದಾಖಲಾತಿಗಳು ಮುಂತಾದ ಮಾಹಿತಿಯನ್ನು ಕೆಳಗಿನಂತೆ ತಿಳಿಸಲಾಗಿದೆ.

ವಾಹನ ಸಬ್ಸಿಡಿ ಯೋಜನೆ ಕರ್ನಾಟಕ 2023:

ಯೋಜನೆಯ ಹೆಸರು: ಸ್ವಹಾಲಂಬಿ ಸಾರಥಿ ಯೋಜನೆ ಸಹಾಯಧನ, ಈ ಯೋಜನೆ ಅಡಿ ಗರಿಷ್ಠ ರೂಪಾಯಿ ಮೂರು ಲಕ್ಷ ವರೆಗೂ ಅಥವಾ ಶೇಕಡ 50ರಷ್ಟು ಸಹಾಯಧನ ನೀಡುತ್ತಾರೆ.

2023 ಮತ್ತು 24 ನೇ ಸಾಲಿನಲ್ಲಿ ಕರ್ನಾಟಕದ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಈ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೆಗೊಳಿಸಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಲು ಬಯಸುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಾಹನ ಸಬ್ಸಿಡಿ ಯೋಜನೆ ಕರ್ನಾಟಕ 2023 ಅರ್ಹತೆಗಳು:

1. ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ ( ಗ್ರಾಮಾಂತರ ಅಥವಾ ಹಳ್ಳಿ ಪ್ರದೇಶದ ಅಭ್ಯರ್ಥಿಗಳಿಗೆ ) ರೂಪಾಯಿ 98,000 ಹೊಂದಿರಬೇಕು. ಹಾಗೂ ನಗರ ಪ್ರದೇಶದಲ್ಲಿ ವಾಸಿಸುವ ಕುಟುಂಬದವರ ವಾರ್ಷಿಕ ವರಮಾನ 1,20,000 ರೂ ಹೊಂದಿರಬೇಕು.
2. ಈ ಯೋಜನೆಯ ಲಾಭ ಪಡೆಯುವ ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷ ಹಾಗೂ 45 ವರ್ಷ ನಿಗದಿಪಡಿಸಲಾಗಿದೆ.
3. ಯೋಜನೆಯ ಲಾಭ ಪಡೆಯುವ ಅಭ್ಯರ್ಥಿಯು ಕಡ್ಡಾಯವಾಗಿ ಲಘು ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು.
4. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಲಾಭಾಂತರ ಕೆಲಸದಲ್ಲಿ ಇರಬಾರದು.
5. ಈ ಯೋಜನೆಯ ಲಾಭ ಪಡೆಯುವ ಅಭ್ಯರ್ಥಿಗಳು ಸ್ವಯಂ ಟ್ಯಾಕ್ಸಿ ಚಲನೆ ಉದ್ದೇಶಕ್ಕೆ ವಾಹನವನ್ನು ನೋಂದಾಯಿಸಿಕೊಳ್ಳತಕ್ಕದ್ದು ( yellow board )
6. ಸ್ವಾವಲಂಬಿ ಸಾರಥಿ ಯೋಜನೆ ಅಡಿ ಅಭ್ಯರ್ಥಿಗಳು ಕೇವಲ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಹಣವನ್ನು ಮಂಜೂರು ಮಾಡಲಾಗುತ್ತದೆ ( ಟ್ಯಾಕ್ಸಿ, ಟಾಟಾ ಎಸಿ ಹಾಗೂ ಗೂಡ್ಸ್ ವಾಹನ ) ಇಲಾಖೆಯು ಮಂಜೂರು ಮಾಡಿದ ಸಾಲದ ಶೇಕಡ 50ರಷ್ಟು ಅಥವಾ ಗರಿಷ್ಠ 3 ಲಕ್ಷ ವರೆಗೂ ಇವುಗಳಲ್ಲಿ ಯಾವುದು ಕಡಿಮೆಯೂ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಹಣಕಾಸು ಅಥವಾ ಬ್ಯಾಂಕ್ ಸಂಸ್ಥೆಗಳು ನಿಗದಿಪಡಿಸುವ ಬಡ್ಡಿಯನ್ನು ಕಡ್ಡಾಯವಾಗಿ ಪಾವತಿಸಬೇಕು.

ವಾಹನ ಸಬ್ಸಿಡಿ ಯೋಜನೆ ಕರ್ನಾಟಕ 2023 ಬೇಕಾಗುವ ದಾಖಲಾತಿಗಳು:
• ಈ ಯೋಜನೆಯ ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಇದರ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
• ಕಡ್ಡಾಯವಾಗಿ ಅಭ್ಯರ್ಥಿಗಳು ಲಘು ವಾಹನ ಚಾಲನಾಪಡವರಿಗೆ ಹೊಂದಿರಬೇಕು
• ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇಕಡ 33 ರಷ್ಟು ವಿಕಲಚೇತನ ಅಂದರೆ ಅಂಗವಿಕಲ ಅಭ್ಯರ್ಥಿಗಳಿಗೆ ಶೇಕಡ ಐದರಷ್ಟು ಹಾಗೂ ತೃತೀಯ ಲಿಂಗಗಳಿಗೆ ಶೇಕಡ ಒಂದರಷ್ಟು ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ.
• ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡ್ ಮಾಡಿಸಿಕೊಂಡಿರಬೇಕು ಏಕೆಂದರೆ ಸಹಾಯಧನ ಹಣವನ್ನು ಸರ್ಕಾರವು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
• ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ನೊಂದಣಿ ಮಾಡಿರಬೇಕು.
• ಅರ್ಜಿ ಸಲ್ಲಿಸಲು ಬಯಸುವರು, ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಕಾಯಂ ವಿಳಾಸವು ಕರ್ನಾಟಕದಲ್ಲಿರಬೇಕು ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂದನೆ 3-ಬಿ ಯಲ್ಲಿ ಪಡೆದಿರಬೇಕು. ಆ ಪ್ರಮಾಣಪತ್ರವು ಜಾತಿಯಲ್ಲಿರಬೇಕು.
• ಅರ್ಜಿ ಸಲ್ಲಿಸಲು ಪ್ರವರ್ಗ 3 ಬಿ ಅಡಿಯಲ್ಲಿ 2a ಇಂದ 2f ವರೆಗೆ ಬರುವ ಸಮುದಾಯಕ್ಕೆ ಸೇರಿರಬೇಕು.

ವಾಹನ ಸಬ್ಸಿಡಿ ಯೋಜನೆ ಕರ್ನಾಟಕ 2023 ಅನ್ನು ಹೇಗೆ ಅರ್ಜಿ ಸಲ್ಲಿಸಬೇಕು.

ಸ್ವಾವಲಂಬಿ ಸಾರಥಿ ಯೋಜನೆಯ ಅರ್ಜಿಗಳನ್ನು ಸಲ್ಲಿಸಲು ಸೇವಾ ಸಿಂಧು ಹೋಟೆಲ್ ಮೂಲಕ ಅಥವಾ ಗ್ರಾಮವನ್ ಅಥವಾ ಬೆಂಗಳೂರು ಒನ್ ಮತ್ತು ಕರ್ನಾಟಕವನ್ನು ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ವಿಶೇಷ ಸೂಚನೆ :

1. ನಿರ್ದೇಶಕರ ಮಂಡಳಿಯ ವಿವೇಚನ ಕೋಟದಡಿ ಸೌಲಭ್ಯ ಪಡೆಯ ಬಯಸುವವರು ಸಹ ಆನ್ಲೈನ್ ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದು.
2. ಮೇಲೆ ತಿಳಿಸಿದಂತೆ ಒಂದು ಕುಟುಂಬದಿಂದ ಒಬ್ಬರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು
3. ಅರ್ಜಿದಾರರು ಸರ್ಕಾರ ಹಾಗೂ ನಿಗಮದ ನಿರ್ದೇಶಕ ಮಂಡಳಿಯು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ ಅಥವಾ ನಿಬಂಧನೆಗಳನ್ನು ಹೊಂದಿರುವರಿಗಿರಬೇಕು

Swahalambi Sarathi Yojana Karnataka application:

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅಧಿಕೃತ ವೆಬ್ಸೈಟ್ : kmcdc. karnataka. govv .in

ಅಭ್ಯರ್ಥಿಗಳು ಈ ಯೋಜನೆಯನ್ನು ದಿನಾಂಕ 30-10-2023ರ ಒಳಗಾಗಿ ಅರ್ಜಿ ಸಲ್ಲಿಸುವುದರ ಮೂಲಕ ಲಾಭವನ್ನು ಪಡೆಯಬಹುದು.

ಸಹಾಯವಾಣಿ ಸಂಖ್ಯೆ :

8867537799/ ದೂರವಾಣಿ ಸಂಖ್ಯೆ- 080-29903994 ಮೂಲಕ ಸಹ ನೀವು ಈ ಯೋಜನೆಯ ಮಾಹಿತಿಯನ್ನು ಪಡೆಯಬಹುದು.

ಒಂದು ಮಾಹಿತಿ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.




Kannada true info:

Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.

Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.

Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.