ADS

Ads-1

BPL card correction start 2023 - ಪಡಿತರ ಚೀಟಿ ತಿದ್ದುಪಡಿ ಆರಂಭ

 ಪಡಿತರ ಚೀಟಿ ತಿದ್ದುಪಡಿ ಆರಂಭ:

BPL card correction start 2023 : ಪ್ರಿಯ ಸ್ನೇಹಿತರೆ, ಇವತ್ತಿನ ಈ ಲೇಖನದಲ್ಲಿ ಕರ್ನಾಟಕ ರಾಜ್ಯದಲ್ಲಿ ಮತ್ತೆ ಪಡಿತರ ಚೀಟಿ ತಿದ್ದುಪಡಿ ಪ್ರಾರಂಭ ಕುರಿತು ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಹೌದು ಸ್ನೇಹಿತರೆ, ನೀವೇನಾದ್ರೂ ನಿಮ್ಮ ಕುಟುಂಬದವರ ಅಥವಾ ನಿಮ್ಮ ಪಡಿತರ ಚೀಟಿಯನ್ನು ಇನ್ನೂ ಕೂಡ ಕೆಲವೊಂದಿಷ್ಟು ತಿದ್ದುಪಡಿಗಳು, ರೇಷನ್ ಕಾರ್ಡ್ ಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಈ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಿ. ಇದೀಗ ಕರ್ನಾಟಕ ಅಧಿಕೃತ ಆಹಾರ ಅಂತರ್ಜಾಲದಲ್ಲಿ ಪಡಿತರ ಚೀಟಿ ತಿದ್ದುಪಡಿ ಆರಂಭವಾಗಿದೆ. ಸರ್ಕಾರವು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಒದಗಿಸಿದೆ. ಈ ತಿದ್ದುಪಡಿಯು ಎಷ್ಟು ದಿನ ಚಾಲ್ತಿಯಲ್ಲಿ ಇರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರತಿದಿನ ಇದೇ ರೀತಿ ಮಾಹಿತಿಯನ್ನು ಪಡೆಯಲು ನಮ್ಮ ಅಂತರ್ಜಾಲಕ್ಕೆ ಭೇಟಿ ನೀಡುತ್ತಿರಿ..
BPL card correction start 2023



ಪಡಿತರ ಚೀಟಿ ರದ್ದಾಗಲು ಕಾರಣ:

ಕರ್ನಾಟಕದಲ್ಲಿ ಪ್ರತಿಯೊಂದು ಸೌಲಭ್ಯ ಪಡೆಯಲು ಪಡಿತರ ಚೀಟಿ ಅಗತ್ಯವಾಗಿದೆ. ಸದ್ಯ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಹಲವಾರು ಜನರು ತಮ್ಮ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ತಿದ್ದುಪಡಿ ಮಾಡಿಸಿಕೊಳ್ಳಲು ಹೋದ ಅದೆಷ್ಟೋ ಜನರ ರೇಷನ್ ಕಾರ್ಡ್ ಬ್ಯಾನ್ ಮಾಡಿದ್ದಾರೆ. ಕರ್ನಾಟಕದ ಮಾಹಿತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 3 ಲಕ್ಷದಷ್ಟು ಪಡಿತರ ಚೀಟಿಗಳು ತಿದ್ದುಪಡಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕೇವಲ ಒಂದು ಲಕ್ಷದಷ್ಟು ಪಡಿತರ ಚೀಟಿಗಳನ್ನು ತಿದ್ದುಪಡಿಗೆ ಅವಕಾಶ ನೀಡಿದೆ. 98000 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಪಡಿತರ ಚೀಟಿಯು ಮೂಲ ಕಾರಣವೆಂದರೆ ಸರ್ಕಾರಿ ಕೆಲಸದಲ್ಲಿ ಉದ್ಯೋಗ ಮಾಡುತ್ತಿರುವ ಸದಸ್ಯರು ಅಥವಾ ನಾಲ್ಕು ಚಕ್ರದ ವಾಹನ ಹೊಂದಿರದ ‌ ಕುಟುಂಬ ಅಥವಾ ವಾರ್ಷಿಕ ಆದಾಯ 1,20,000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಪಡಿತರ ಸೀಟಿಗೆ ಅನರ್ಹರು.

BPL ration card ಯಾರೆಲ್ಲಾ ಪಡೆಯಬಹುದು:

ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಪಡಿತರ ಚೀಟಿಯನ್ನು ಪಡೆಯುವ ಕುಟುಂಬವು ಬಡತನ ರೇಖೆಗಿಂತ ಕೆಳಗಿರಬೇಕು ಅಂತಹ ಜನರಿಗೆ ಮಾತ್ರ ಈ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ಮಾಹಿತಿಯನ್ನು ಕೆಳಗೆ ವಿನಂತಿ ಹಂಚಿಕೊಳ್ಳಲಾಗಿದೆ.
1. ಪಡಿತರ ಚೀಟಿ ಹೊಂದಿರ ಕುಟುಂಬದ ವಾರ್ಷಿಕ ಆದಾಯವು 1,20,000 ಕ್ಕಿಂತ ಅಧಿಕವಾಗಿರಬಾರದು.
2. ಈ ಕುಟುಂಬವು ಯಾವುದೇ ತರಹದ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರಬಾರದು
3. ಪಡಿತೀರಿ ಚೀಟಿ ಹೊಂದಿದ ಕುಟುಂಬದ ಸದಸ್ಯರಲ್ಲಿ ಯಾರು ಸಹ ಲಾಭದಾಯಕ ಅಥವಾ ಸರ್ಕಾರಿ ಉದ್ಯೋಗದಲ್ಲಿ ಕೆಲಸವನ್ನ ನಿರ್ವಹಿಸಬಾರದು.
4. ಪಡಿತರ ಚೀಟಿ ಹೊಂದಿದ ಕುಟುಂಬವು GST income tax ಪಾವತಿ ಮಾಡಬಾರದು.
5. 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರಬಾರದು, ನಗರ ಪ್ರದೇಶದಲ್ಲಿ 1000 ಸ್ಕ್ವೇರ್ ಮೀಟರ್ ದಲ್ಲಿ ಮನೆ ಹೊಂದಿರಬಾರದು.

ಕರ್ನಾಟಕ ಸರ್ಕಾರದಿಂದ ದೊರೆಯುವ ಎಲ್ಲಾ ಯೋಜನೆಗಳನ್ನು ಅಥವಾ ಲಾಭಗಳನ್ನು ಪಡೆಯುವ ಬಡತನ ರೇಖೆಗಿಂತ ಕೆಳಗಿರುವ ಜನರು ತಮ್ಮ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಕೇಂದ್ರ ಸರಕಾರ ಆದೇಶದ ಮೇರೆಗೆ ಮೋಸ, ವಂಚನೆ ಮಾಡಿ ಪಡಿತರ ಚೀಟಿ ಪಡೆದವರ ಕಾಡುಗಳು ರದ್ದಾಗಲಿವೆ. ಸರ್ಕಾರಕ್ಕೆ ವಂಚನೆ ಅಥವಾ ಮೋಸ ಮಾಡಿ ರೇಷನ್ ಕಾರ್ಡ್ ಪಡೆದ ಕೆಲವೊಂದಿಷ್ಟು ಪಡಿತರ ಚೀಟಿಗಳನ್ನು ಬ್ಯಾನ್ ಮಾಡಲಾಗಿದೆ.

ಪಡಿತರ ಚೀಟಿಯ ಉದ್ದೇಶಗಳು:

ಪಡಿತರ ಚೀಟಿಗಳು ವಿತರಣೆಯು ರಾಜ್ಯದಲ್ಲಿ ಬಡತನವನ್ನು ಹೋಗಲಾಡಿಸಲು ಒಂದು ಕುಟುಂಬ ಯಾವುದೇ ರೀತಿಯ ಉಪವಾಸದಿಂದ ನರಳಬಾರದು ಎಂದು ಉಪಯೋಗವಾಗುವ ರೀತಿಯಲ್ಲಿ ಈ ಪಡಿತರ ಚೀಟಿಗಳನ್ನು ಜಾರಿಗೆ ತರಲಾಯಿತು. ರೇಷನ್ ಕಾರ್ಡ್ ಗಳ ಮೂಲಕ ಬಡತನ ರೇಖೆಗಳ ಅಂತ ಕಡಿಮೆ ಇರುವ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಸಹ ಸಮಾಜದ ಮುಖ್ಯ ವಾಹಿನಿಗೆ ತರಲು ಈ ಪಡಿತರ ಚೀಟಿಯು ಉಪಯೋಗವಾಗಿವೆ. ಸರ್ಕಾರದ ಈ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕಡಿಮೆ ಇರುವ ಜನರ ಗಿಂತ ಅನ್ಯ ಜನರು ಬಳಸುವುದೇ ಹೆಚ್ಚಾಗಿದೆ. ಈ ಯೋಜನೆಯು ಕೇವಲ ಬಡವರಿಗಾಗಿ ಜಾರಿಗೆ ಬಂದಿದ್ದ ಆಗಿದ್ದರು ಸಹ ಹಲವಾರು ವಂಚನೆಯ ಮೂಲಕ ಜನರು ಪಡಿತರ ಚೀಟಿಯನ್ನು ಪಡೆದುಕೊಂಡಿದ್ದಾರೆ.

ಪಡಿತರ ಚೀಟಿ ತಿದ್ದುಪಡಿ ಯಾವಾಗ:

ಕರ್ನಾಟಕದಲ್ಲಿ ಹಲವಾರು ಕುಟುಂಬಗಳು ಸಹ ಪಡಿತರ ಚೀಟಿ ತಿದ್ದುಪಡಿ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ. ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಜನಸಾಮಾನ್ಯರು ಕಾಯುತ್ತಿದ್ದಾರೆ. ಆದರೆ ಈ ಯೋಜನೆಯು ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು ಎಂಬ ಕಾರಣಕ್ಕಾಗಿ ಪಡಿತರ ಚೀಟಿಯ ತಿದ್ದುಪಡಿಯನ್ನ ಹಲವಾರು ದಿನಗಳಿಂದ ಅನುಮತಿ ನೀಡಿಲ್ಲ. ಈ ಕಾರಣದಿಂದಾಗಿ ಸುಮಾರು ಒಂದು ವರ್ಷದಿಂದಲೂ ಸಹ ಹಲವಾರು ಪಡಿತರ ಚೀಟಿಗಳು ತಿದ್ದುಪಡಿ ಆಗಿಲ್ಲ.

ಆದರೆ ಈಗ ರಾಜ್ಯ ಸರ್ಕಾರವು ಪಡಿತರ ಚೀಟಿಗೆ ತಿದ್ದುಪಡಿ ಮಾಡಿಸಿಕೊಳ್ಳಲು 9 ದಿನಗಳ ಕಾಲಾವಕಾಶ ನೀಡಿದ್ದು ಆದಷ್ಟು ಬೇಗ ತಿದ್ದುಪಡಿ ಮಾಡಿಸಿಕೊಳ್ಳುವ ಬಯಸುವವರು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ತಿದ್ದುಪಡಿಗಾಗಿ ವಿನಂತಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಸರ್ಕಾರಿ ಯೋಜನೆ ಹಾಗೂ ಸರ್ಕಾರಿ ಇಂದ ಬರುವ ಸೌಲಭ್ಯಗಳ ಮಾಹಿತಿ ಪಡೆಯಲು ನಮ್ಮ ಅಂತರ್ಜಾಲಕ್ಕೆ ಭೇಟಿ ನೀಡುತ್ತಿರಿ.


Kannada true info:
Kannada true info ಈ ಸುದ್ದಿ ವಾಹಿನಿಯು ಕನ್ನಡ ಜನತೆಗಾಗಿ ನಿರ್ಮಿಸಿದ ಒಂದು ಸುದ್ದಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವೇನಾದರೂ ಸಿನಿ ರಸಿಕರಾಗಿದ್ದರೆ ಇಲ್ಲಿ ಸಹ ಸಿನಿಮಾದ ಬಗ್ಗೆ ಹಲವಾರು ರೀತಿಯ ಮಾಹಿತಿಯನ್ನು ಒದಗಿಸುತ್ತೇವೆ.

Kannada true info ಕರ್ನಾಟಕದಲ್ಲಿ ನಡೆಯುವ ಅಥವಾ ಸಂಭವಿಸುವ ಹಲವಾರು ಮಾಹಿತಿಯನ್ನು ಈ ಒಂದು ಸುದ್ದಿವಾ ಹೇಳಿ ಬರೆಯಲಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಒಂದು ವಾಹಿನಿಯಲ್ಲಿ ಪ್ರಕಟಿಸಲಾಗುತ್ತದೆ.

Kannada true info ಈ ಸುದ್ದಿವಾಹಿನಿಯು ಯಾವುದೇ ವ್ಯಕ್ತಿ ಅಥವಾ ಯಾವುದೇ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಈ ಹೆಸರಿನ ಮೇಲೆ ಯಾರಾದರೂ ನಿಮಗೆ ಹಣವನ್ನು ಕೇಳಿದರೆ ದಯವಿಟ್ಟು ಪಾವತಿ ಮಾಡಬೇಡಿ ಹಾಗೂ ಅವರ ಬಗ್ಗೆ ನಮ್ಮ ಮೇಲ್ ಐಡಿಗೆ ಮೆಸೇಜ್ ಮಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.