ಪ್ರಿಯ ಸ್ನೇಹಿತರೆ ಇವತ್ತಿನ ಈ ಯುಗದಲ್ಲಿ ಹಲವಾರು ರೀತಿಯ ಸೋಶಿಯಲ್ ಮೀಡಿಯಾಗಳನ್ನು ನಾವು ನೋಡುತ್ತೇವೆ. ತಂತ್ರಜ್ಞಾನ ಹಾಗೂ ಮೊಬೈಲುಗಳ ಆವಿಷ್ಕಾರದಿಂದ ಇವತ್ತಿನ ದುನಿಯಾ ಸ್ಮಾರ್ಟ್ ಫೋನ್ ಮೊಬೈಲ್ ಯುಗವಾಗಿದೆ. ಹಲವಾರು ಜನರು ಈಗ ಸ್ಮಾರ್ಟ್ ಫೋನ್ ಖರೀದಿಸಲು ಶುರು ಮಾಡಿದ್ದಾರೆ. ಸ್ಮಾರ್ಟ್ ಫೋನ್ ಇದ್ದಮೇಲೆ ಅಲ್ಲಿ ಖಂಡಿತವಾಗಿಯೂ ವಾಟ್ಸಾಪ್ ಇದ್ದೇ ಇರುತ್ತದೆ. ಈಗ ಓದು ಬರಹ ಬರೆದಿದ್ದರೂ ಸಹ ವಾಟ್ಸಪ್ ನಲ್ಲಿ ಚಾಟಿಂಗ್ ನಡೆಸುತ್ತಾರೆ. ಕೆಲವೊಮ್ಮೆ ಸ್ನೇಹಿತರು ನಮಗೆ ವಾಟ್ಸಪ್ ಮೆಸೇಜ್ ಮಾಡಿ ಅದನ್ನು ಡಿಲೀಟ್ ಮಾಡಿ ಬಿಡುತ್ತಾರೆ, ನಾವು ಅದನ್ನು ಓದಿ ಇರುವುದಿಲ್ಲ ಅಂತ ಮೆಸೇಜ್ ಓದುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
How to read WhatsApp deleted message:
ಹೌದು ಸ್ನೇಹಿತರೆ, ಇವತ್ತಿನ ಈ ವರದಿಯಲ್ಲಿ ವಾಟ್ಸಪ್ ನಲ್ಲಿ ಡಿಲೀಟ್ ಆದ ಸಂದೇಶಗಳನ್ನು ಹೇಗೆ ಓದಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಈ ವಾಟ್ಸಪ್ ತನ್ನ ವ್ಯಾಪ್ತಿಯನ್ನು ಹೊಂದಿರುವ ವಿಚಾರ ನಿಮಗಾಗಲೇ ತಿಳಿದಿದೆ. ವಾಟ್ಸಪ್ ನಿಂದ ಕೆಲವು ಹೇಳಲಾಗದ ಮಾಹಿತಿಯನ್ನು ಅಥವಾ ಮನಸ್ಸಿನ ಮಾತನ್ನು ಕೆಲವರು whatsapp ಮೂಲಕ ಹಂಚಿಕೊಳ್ಳುತ್ತಾರೆ. ವಾಟ್ಸಾಪ್ ಸುಮಾರು ಎರಡು ಬಿಲಿಯನ್ ಜನರನ್ನ ಹೊಂದಿರುವ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಜನರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಅಥವಾ ವೃತ್ತಿಪರ ಕೆಲಸಕ್ಕಾಗಿ ಜನರ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ವಾಟ್ಸಪ್ ಕೂಡ ತನ್ನ ಗ್ರಾಹಕರಿಗೆ ಅನುಕೂಲವಾಗುವಂಥದ್ದು ಸುಮಾರು ರೀತಿಯ ವೈಶಿಷ್ಟ್ಯತೆಯನ್ನು ಬಿಡುಗಡೆ ಮಾಡಿ ವಾಟ್ಸಪ್ಪ್ ಅಪ್ಲಿಕೇಶನ್ ಬಳಸಲು ಸುಲಭ ಮಾಡಿದೆ.ಒಬ್ಬ ವ್ಯಕ್ತಿ ಅಥವಾ ನಿಮ್ಮ ಸ್ನೇಹಿತ ನಿಮಗೆ ಮೆಸೇಜ್ ಮಾಡಿ ಅದನ್ನು ತಕ್ಷಣವೇ ಡಿಲೀಟ್ ಮಾಡಿದರೆ ನಿಮಗೆ ಕುತೂಹಲ ಆಗುವುದು ಸಹಜ. ಏಕೆಂದರೆ ನಿಮಗೆ ಕಳಿಸಿದ ಮೆಸೇಜ್ಯಲ್ಲಿ ಏನಿತ್ತು? ಯಾವ ಕಾರಣಕ್ಕಾಗಿ ಮೆಸೇಜ್ ಡಿಲೀಟ್ ಮಾಡಿದ? ಎಂಬ ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಬರಲು ಆರಂಭಿಸುತ್ತವೆ. ವಾಟ್ಸಪ್ ನಲ್ಲಿ ಬಂದ ಹೊಸ ಅಪ್ಡೇಟ್ ಇಂದ ಜನರು ಸುಲಭವಾಗಿ ತಾವು ಕಲಿಸಿರುವ ಮೆಸೇಜನ್ನು every for delete ಎಂದು ಮಾಡುವುದರಿಂದ ಅವರು ಕಳಿಸಿದ ಮೆಸೇಜ್ ಓದಲು ಸಾಧ್ಯವಿಲ್ಲ.