E-Shram Card: ಕೇಂದ್ರ ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ ಅದೇನೆಂದರೆ ಇನ್ನು ಮುಂದೆ ಪ್ರತಿ ತಿಂಗಳಿಗೆ 3000 ನಿಮ್ಮ ಖಾತೆಗೆ ಜವಾವಣಿ ಆಗಲಿದೆ. 3000 ಅನ್ನು ನೀವು ಸಹ ಪಡೆಯಬಹುದು, ಅದು ಹೇಗೆ ಎಂಬುದನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರಕಾರದಿಂದ ಬರುವ ಸರ್ಕಾರಿ ಸೌಲಭ್ಯಗಳ ಮಾಹಿತಿಯನ್ನು ಪಡೆಯಲು ನಮ್ಮ ಒಂದು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.
ಕೇಂದ್ರ ಸರ್ಕಾರವು ನಮ್ಮ ಭಾರತದಲ್ಲಿರುವ ಹಲವಾರು ಅಸಂಘಟಿತ ಕಾರ್ಮಿಕರ ಅಗತ್ಯಗಳನ್ನು ಪರಿಹರಿಸಲು ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿಕೊಂಡಿದೆ ಅದರಲ್ಲಿ ಸಹ ಈ ಯೋಜನೆಯಾಗಿದೆ. ಇ-ಶ್ರಮ ಪೋರ್ಟಲ್ ಮೂಲಕ ಅಸಂಘಟಿತ ಕಾರ್ಮಿಕರು ಅರ್ಜಿಗಳನ್ನು ಸಲ್ಲಿಸಿ ನೊಂದಹಿಸಿಕೊಳ್ಳಬಹುದು, ತದನಂತರ ಇ-ಶ್ರಮ ಕಾರ್ಡ್ ನೀವು ಸಹ ಪಡಿಯಬಹುದು. ಇದರ ಮುಖ್ಯ ಉದ್ದೇಶವೆಂದರೆ ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಸೇವೆಗಳನ್ನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇ-ಶ್ರಮ ಕಾರ್ಡ್ ಎಂದರೇನು ಸಂಕ್ಷಿಪ್ತ ಮಾಹಿತಿ.
ಇ-ಶ್ರಮ ಕಾರ್ಡ್ ಇದು ಒಂದು ಪ್ರಯೋಜನಕಾರಿ ಕಾರ್ಡ್ ಆಗಿದ್ದು ಭಾರತದಲ್ಲಿ ಬರುವ ಹಲವಾರು ಅಸಂಘಟಿತ ವಲಯದ ಕಾರ್ಮಿಕರನ್ನು ಒಂದು ಜಾಲತಾಣದ ಮೂಲಕ ನೊಂದಾಯಿಸಿಕೊಳ್ಳಲು ಹಾಗೂ ಅವರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕಾರ್ಡ್ ಪ್ರಯೋಜನಕಾರಿಯಾಗಿದೆ.
ಯಾರು ಇ-ಶ್ರಮ ಕಾರ್ಡ್ ಪಡಿಯಬಹುದು.
ಭಾರತದಲ್ಲಿ ವಾಸಿಸುವ 16 ರಿಂದ 59 ವರ್ಷದೊಳಗಿನ ಎಲ್ಲಾ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರು ದಿನಗೂಲಿಗಳು ಹಾಗೂ ವ್ಯಕ್ತಿಗಳು ಇದರ ಲಾಭವನ್ನು ಪಡೆಯಬಹುದು.ಇ-ಶ್ರಮ ಕಾರ್ಡ್ ಪ್ರಮುಖ ಗುಣಗಳು ಮತ್ತು ಲಾಭಗಳು
ಸಮಾಜ ಕಲ್ಯಾಣಕ್ಕೆ ವರ್ಧಿಕ ಪ್ರವೇಶ: ಇ-ಶ್ರಮ ಪೋರ್ಟಲ್ ಮೂಲಕ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಯನ್ನು ನೋಂದಾಯಿಸಲು ಮತ್ತು ಅದರ ಮೂಲಕ ಪ್ರವೇಶಿಸಲು ಭೂ ರೈತ ಮತ್ತು ಕೃಷಿ ಕಾರ್ಮಿಕರು ಹಲವಾರು ರೈತರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುತ್ತದೆ. ಈ ಒಂದು ಸೇವೆಯ ಮೂಲಕ ಸ್ಥಳ ಮಟ್ಟದ ಜೀವನವನ್ನು ಸುಧಾರಿಸಿ ಅವರನ್ನು ಸಮಾಜದ ಮೇಲಕ್ಕೆ ತರುವ ಒಂದು ಸಣ್ಣ ಪ್ರಯತ್ನ ಈ ಒಂದು ಕಾರ್ಡ್ ನ ಮೂಲಕ ತಿಳಿಯುತ್ತದೆ.ಪಿಂಚಣಿ ಕವರೇಜ್: ಇ-ಶ್ರಮ ಕಾರ್ಡ್ ನೊಂದಾಯಿತ ಪ್ರತಿಯೊಬ್ಬ ಕಾರ್ಮಿಕರಿಗೂ ಸಹ ಎರಡು ಲಕ್ಷದ ವರೆಗೂ ಜೀವ ವಿಮ ರಕ್ಷಣೆ ದೊರೆಯುತ್ತದೆ. ಒಂದು ವೇಳೆ ತಾವು ನಿರ್ಮಿಸುವ ಕೆಲಸದಲ್ಲಿ ಏನಾದರೂ ಅಪಘಾತ ಅಥವಾ ಭಾಗಶಃ ಅಂಗವಿಕಲತೆ ಉಂಟಾದರೆ ಅಂಥವರಿಗೂ ಸಹ ಈ ಒಂದು ಇ-ಶ್ರಮ ಕಾರ್ಡ್ ಮೂಲಕ ಒಂದು ಲಕ್ಷದವರೆಗೂ ಆರ್ಥಿಕ ಸಹಾಯ ದೊರೆಯುತ್ತದೆ. ಅಷ್ಟೇ ಅಲ್ಲದೆ ಕೆಲಸ ಮಾಡುವ ಸಂದರ್ಭದಲ್ಲಿ ಅಪಘಾತದಲ್ಲಿ ಕಾರ್ಮಿಕರು ಏನಾದರೂ ಮರಣ ಹೊಂದಿದರೆ ಅವರ ನಾಮಿನಿ ಅಥವಾ ಸಂಬಂಧಿಕರಿಗೆ ಅಥವಾ ಸಂಗಾತಿಯು ಈ ಒಂದು ವಿಮಾ ಮೊತ್ತವನ್ನು ಪಡೆಯಬಹುದು.
ತುರ್ತು ಸಹಾಯ ಸೇವೆ : ಈ ಒಂದು ಸೇವೆಯ ಮೂಲಕ ಕೇವಲ ಪಿಂಚಣಿ ಸೌಲಭ್ಯ ಮಾತ್ರವಲ್ಲದೆ ಇದರಲ್ಲಿ ತುರ್ತು ಸಂದರ್ಭದಲ್ಲಿ ಅಂದರೆ ಸಾಂಕ್ರಾಮಿಣಕ ರೋಗಗಳಂತಹ ರಾಷ್ಟ್ರೀಯ ಬಿಕ್ಕಟ್ಟುಗಳ ಸಮಯದಲ್ಲಿ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಸಮಯೋಚಿತ ಸಹಾಯವನ್ನು ಈ ಒಂದು ಇ-ಶ್ರಮ ಕಾಡ್ ಮೂಲಕ ಅವರಿಗೆ ದೊರೆಯಬೇಕಾದ ಆರ್ಥಿಕ ನೆರವನ್ನು ಸರ್ಕಾರವು ನೀಡಲು ಸಹಾಯವಾಗುತ್ತದೆ.
ಇ-ಶ್ರಮ ಕಾಡ್ ನೊಂದಾಯಿಣಿ ಹೇಗೆ ಮಾಡುವುದು
ನೀವು ಸಹ ಈ ಒಂದು ಇ-ಶ್ರಮ ಕಾಡು ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ ನಿಮ್ಮ ಊರಿನಲ್ಲಿ ಇರುವ ನಾಗರಿಕ ಸೇವೆಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳು ಈ ಅಂಗಡಿಗಳಿಗೆ ಭೇಟಿ ನೀಡಿ ಅವರಿಗೆ ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಹೇಳಬಹುದು ಅವರು ನಿಮ್ಮಿಂದ ಆಧಾರ್ ಕಾರ್ಡ್ ಪಡೆದು ಅರ್ಜಿಗಳ ಕಲಿಕೆಗೆ ಸಹಾಯ ಮಾಡುತ್ತಾರೆ.ಒಂದೇ ವೇಳೆ ನೀವೇ ಸ್ವತಹ ಅರ್ಜಿಗಳನ್ನು ಸಲ್ಲಿಸಲು ಬಯಸಿದರೆ ಮೊದಲು
1. ಕೇಂದ್ರ ಸರಕಾರದ ಆಫೀಸಿಯಲ್ ವೆಬ್ಸೈಟ್ ಆದ ಇ-ಶ್ರಮ ಕಾರ್ಡ್ ಪೋರ್ಟಲ್ ಗೆ ಭೇಟಿ ನೀಡಬೇಕು ತದನಂತರ ನಿಮ್ಮ ಆಧಾರ್ ಕಾರ್ಡಿಗೆ ಸೇರಿಸಿದ ಮೊಬೈಲ್ ನಂಬರ್ ಅಥವಾ ನೋಂದಾಣಿಯಾದ ನಂಬರನ್ನು ಹಾಕಿ ಅಲ್ಲಿ ನೀಡಲಾದ ಕ್ಯಾಪ್ಚ ಕೋಡ್ ನಮೂದಿಸಿ ನಂತರ ನಿಮಗೆ ಒಂದು ಓಟಿಪಿ ನಮೂದಿಸಿ ಬಟನ್ ಕ್ಲಿಕ್ ಮಾಡಿ.
2. ನಿಮ್ಮ ಆಧಾರ್ ಕಾರ್ಡಿಗೆ ನೋಂದಾಯಿತ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ನಮೂದಿಸಿ ಕ್ಯಾಪ್ಚರ್ ಕೋಡ್ ಸೇರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಆಧಾರ್ ಕಾರ್ಡಿನಲ್ಲಿ ಇರುವ ಎಲ್ಲಾ ಮಾಹಿತಿ ಅಂದರೆ ನಿಮ್ಮ ಹೆಸರು ನಿಮ್ಮ ವಿಳಾಸ ಮುಂತಾದವುಗಳನ್ನು ನೀವು ಅಲ್ಲಿ ಕಾಣಬಹುದು ತದನಂತರ ಅಲ್ಲಿ ಕೇಳಲಾದ ಕೆಲವು ಷರತ್ತುಗಳು ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ ಓಟಿಪಿಯನ್ನು ನಮೂದಿಸಿ
4. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೇಲೆ ಕಾಣುವ ವೈಯಕ್ತಿಕ ವಿವರಗಳನ್ನು ಒಮ್ಮೆ ಸರಿಯಾಗಿ ನೋಡಿಕೊಳ್ಳಿ.
5. ನಿಮ್ಮ ವಿಳಾಸ, ನಿಮ್ಮ ಹೆಸರು ಶೈಕ್ಷಣಿಕ ಅರ್ಹತೆ ಇತ್ಯಾದಿ ಅಗತ್ಯ ಮಾಹಿತಿಯನ್ನು ಸರಿಯಾಗಿ ಸೇರಿಸಿ.
6. ನಿಮ್ಮ ಒಂದು ಉದ್ಯೋಗ ಅಥವಾ ನಿಮ್ಮ ಕೆಲಸದ ಮಾಹಿತಿ ಅಥವಾ ಕೌಶಲ್ಯದ ವಿವರಣೆ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾದ ಜಾಗದಲ್ಲಿ ಭರ್ತಿ ಮಾಡಿ.
7. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು ಸ್ವಯಂ ಘೋಷಣೆಯ ವರದಿಯನ್ನು ಸೇರಿಸಿ.
8. ಮತ್ತೊಮ್ಮೆ ನೀವು ನಮೂದಿಸುವ ಮಾಹಿತಿಯನ್ನು ಸರಿಯಾಗಿ ಗಮನಿಸಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
9. ಮತ್ತೆ ನಿಮಗೆ ಕಳಸರಾದ ಮೊಬೈಲ್ ಸಂಖ್ಯೆಗೆ ಓಟಿಪಿಯನ್ನು ಸರಿಯಾಗಿ ನಮೂದಿಸಿ ಪರಿಶೀಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ.
10. ಈ ಶ್ರಮ ಕಾಡನ್ನು ರಚಿಸಲಾಗಿದೆ ಎಂಬ ಒಂದು ಮಾಹಿತಿಯನ್ನು ನೀವು ಕಾಣಬಹುದು ತದನಂತರ ನೀವು ಅದನ್ನ ಡೌನ್ಲೋಡ್ ಮಾಡಿಕೊಂಡು ಜೆರಾಕ್ಸ್ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.