Gruhalakshmi scheme Amount:
ಕರ್ನಾಟಕದ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಎಂಬುದನ್ನ ಜಾರಿಗೆ ತಂದಿತ್ತು ಆದರೆ ಕಳೆದ ಕೆಲವು ದಿನಗಳಿಂದ ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ 4000 ಬಾಕಿ ಮೊತ್ತ ಇನ್ನೂ ಸಹ ಇದರ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಜಮಾವಣೆ ಯಾಗಿರುವುದಿಲ್ಲ ಇದರಿಂದ ಸಾಕಷ್ಟು ಜನರು ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಸಾಕಷ್ಟು ಮಹಿಳೆಯರಿಗೆ ಪ್ರಯೋಜನಕಾರಿಯಾಗಿತ್ತು. ಅಷ್ಟೇ ಅಲ್ಲದೆ ಇದರ ಜನಪ್ರಿಯತೆ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದೆ.
Gruhalakshmi scheme benefits
ಈ ಯೋಜನೆಯ ಉದ್ದೇಶ ಏನೆಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಹಾಗೂ ಆ ಕುಟುಂಬದ ಮಹಿಳಾ ಸದಸ್ಯಗೆ ಆರ್ಥಿಕ ನೆರವು ನೀಡುವ ಉದ್ದೇಶ ಈ ಯೋಜನೆಗಾಗಿತ್ತು. ಈಗ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಒಟ್ಟು ನಾಲ್ಕು ಸಾವಿರ ಮೊತ್ತದ ಕುರಿತು ಸರ್ಕಾರವು ಇದರ ಉದ್ದೇಶಿಸಿ ಮಾಹಿತಿಯನ್ನು ಹೊರ ಹಾಕಿದೆ. ಇದರ ಕುರಿತು ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ ಸರ್ಕಾರದ ಮಾಹಿತಿಯನ್ನು ಮೊದಲು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ.4000 ಗೃಹಲಕ್ಷ್ಮಿ ಅಮೌಂಟ್ ಬ್ಯಾಂಕ್ ಖಾತೆಗೆ ಜಮಾ!
ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಇದರ ಜನಪ್ರಿಯ ಯೋಜನೆಗಳೆಂದರೆ ಹೆಸರುವಾಸಿಯಾಗಿದೆ. ಹಲವಾರು ಯೋಜನೆಗಳನ್ನ ಜಾರಿಗೆ ತರುವ ಮೂಲಕ ಇದುವರೆಗೂ ಸಹ ಕಾಂಗ್ರೆಸ್ ಸರಕಾರ ಅಧಿಕಾರವನ್ನು ನಿರ್ವಹಿಸುತ್ತಿದೆ. ಕರ್ನಾಟಕದ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಅಮೌಂಟ್ ಲೋಕಸಭಾ ಚುನಾವಣೆ ಮುಗಿಯವರೆಗೂ ಸಹ ನೇರವಾಗಿ ಅವರ ಬ್ಯಾಂಕ್ ಖಾತೆಗೆ 2000 ಜಮಾವಣೆ ಆಗಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಈ ತೊಂದರೆಯನ್ನು ಫಲಾನುಭವಿಗಳು ಅನುಭವಿಸುತ್ತಿದ್ದಾರೆ ಅಂದರೆ ಅವರಿಗೆ ಸರಿಯಾಗಿ ಗೃಹಲಕ್ಷ್ಮಿ ಸ್ಕೀಮ್ ಅಮೌಂಟ್ ಬರುತ್ತಿಲ್ಲ. ಗೃಹಲಕ್ಷ್ಮಿ ಸ್ಕೀಮ್ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಸ್ಕೀಮ್ ಸ್ಥಗಿತವಾಗುವುದಿಲ್ಲ. ಮೇ ತಿಂಗಳ ತನಕ ಸರಿಯಾಗಿ ಹಣ ಪಾವತಿಯಾಗಿದೆ ಆದರೆ ಕೆಲವು ಕಾರಣಾಂತರಗಳಿಂದ ಜೂನ್ ಹಾಗೂ ಜುಲೈ ತಿಂಗಳ ಮೊತ್ತ ಪಾವತಿಯಾಗುತ್ತಿಲ್ಲ ಈ ಕುರಿತು ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅಗಸ್ಟ್ ಮೊದಲ ವಾರದಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಗುಣಲಕ್ಷ್ಮೀ ಸ್ಕೀಮ್ ಹಣ ಜಮಾಾವಣೆ ಯಾಗಲಿದೆ ಎಂದು ಭರವಸೆ ನೀಡಿದ್ದಾರೆ.ಸನ್ಮಾನ್ಯ ಶ್ರೀ ಸಿದ್ದರಾಮಯ್ಯವರ ಅಭಯ!
ಕರ್ನಾಟಕದ ಪ್ರಸಿದ್ಧ ಮುಖ್ಯಮಂತ್ರಿ ಯಾಗಿರುವ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮಡಿಕೇರಿಯಲ್ಲಿ ನೆರೆಹಾನಿಯ ಕುರಿತು ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೇ ತಿಂಗಳವರೆಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಬಿಪಿಎಲ್ ಕಾರ್ಡ್ ಮಹಿಳಾ ಸದಸ್ಯರಿಗೆ ತಲುಪಿಸಲಾಗಿದೆ. ಜೂನ್ ಹಾಗೂ ಜುಲೈ ತಿಂಗಳ ಎರಡು ತಿಂಗಳ ಹಣ ಪಾವತಿ ಮಾಡುವುದು ಅಷ್ಟೇ ಬಾಕಿ ಇರುವುದು ಮುಂದಿನ ತಿಂಗಳ ಬಾಕಿ ಮೊತ್ತವನ್ನು ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ಇದರ ಮುಂದುವರೆದು ಇತ್ತೀಚಿನ ಕೆಲವು ತೊಂದರೆಳ ಒರತಾಗಿಯೂ ಕರ್ನಾಟಕ ರಾಜ್ಯ ಸರಕಾರವು ಗೃಹಲಕ್ಷ್ಮಿ ಯೋಜನೆ ಮತ್ತು ಅದರ ಫಲಾನುಭವಿಗಳಿಗೆ ಬರಬೇಕಾದ ಹಣದ ಕುರಿತು ಯಾವುದೇ ಯೋಚನೆ ಮಾಡಬೇಕಾಗಿಲ್ಲ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅದರ ಫಲಾನುಭವಿಗಳಿಗೆ ತಲುಪಿಸುವವರೆಗೂ ಸರ್ಕಾರ ಕೆಲಸವನ್ನು ಮುಂದುವರಿಸುತ್ತದೆ. ಹಲವಾರು ತಾಂತ್ರಿಕ ಮತ್ತು ನಿಧಿಯ ಸಮಯೋಚಿತ ಬಿಡುವಡಿಗೆಯೂ ಕರ್ನಾಟಕದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಬೆಂಬಲಿಸಲು ಇದು ಮುಂದುವರೆಯುತ್ತದೆ. ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರಿಗೂ ಸಹ ಇದರ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮಿ ಕುರಿತು ಮಾತನಾಡಿದ್ದಾರೆ.
gruhalakshmi status check
ಗೃಹಲಕ್ಷ್ಮಿ 11 ಮತ್ತು 12 ಕಂತಿನ ಅಮೌಂಟ್:ಸರ್ಕಾರದ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಅಮೌಂಟ್ ಆಗಸ್ಟ್ ಅಥವಾ ಅದರ ಕೊನೆಯ ವಾರದಲ್ಲಿ ಜಮಾವಣೆಯಾಗಬಹುದು ಎಂಬುದು ಮಾಹಿತಿ ದೊರಕಿದೆ.